ಮನಸ್ಸು ಬಿಳಿ ಹಾಳೆ ನಿಜ
ಇಲ್ಲವೆನ್ನರು ಯಾರೂ
ಹಾಳೆ ಮೇಲೆ ಬಿದ್ದ ಶಾಯಿಯ
ಅಳಿಸಲಾಗದು ಕಾಲವೂ!
ಈ ಹಾಳೆಯ ಮೇಲೆ ಬರಿಯ
ಕಹಿ ನೆನಪಿನದೆ ದಾಂಧಲೆ
ಕಾಣದೇಕೊ ಒಂದಾದರೂ
ಸವಿನೆನಪಿನ ದಾಖಲೆ !
ನೋವ ನಲಿವ ನಗುವ ಅಳುವ
ಒಂದೇ ಶಾಯಿ ಬರೆಯಿತು
ಸುಖವು ಮಾತ್ರ ಹಾಳೆಯಿಂದ
ಹೇಗೋ ಆವಿಯಾಯಿತು !
ಕಲೆಯು ಕಾಣದಿರಬಹುದು
ಮಾಸಿದಂತೆ ತೋರಬಹುದು
ಆದರೆ ಸುಪ್ತ ಜ್ವಾಲಾಮುಖಿಯದು
ಎಂದೋ ಭುಗಿಲೇಳಬಹುದು.
ಕಾಲ ವಾಸಿ ಮಾಳ್ಪುದಂತೆ
ಮನಸಿಗಾದ ಗಾಯವ
ಶಾಯಿಯಿಂದ ಆದ ಗುರುತ
ಅಳಿಸಲದಕೆ ಸಾಧ್ಯವಾ ?
*****************************
ಸುಮ್ನೆ…ಸೆಂಟಿಮೆಂಟಲ್ ಫೀಲ್ ಇರ್ಲಿ ಅಂತ ಒಂದು ಕವನ ಬರೆಯಕ್ಕೆ ಟ್ರೈ ಮಾಡಿದೆ ಅಷ್ಟೇ..ನಿಜ ಅಲ್ಲ ಏನಲ್ಲ. 🙂
chennagide ma kavana…
ella kavanagalU nija aagabEkantha enu illa…
ಪ್ರತಿಕ್ರಿಯೆ by antarvaani — ಏಪ್ರಿಲ್ 13, 2009 @ 11:00 ಅಪರಾಹ್ನ |
ಮನಸು ಬಿಳಿ ಹಾಳೆಯಂತೆ
ಹಾಳೆಯ ಮೇಲೆ ಮೂಡುವುದು
ಸಿಹಿ, ಕಹಿ ನೆನಪಿನ
ಬರಹದಾ ಗುರುತು
ಕಾಲ ಕಳೆದಂತೆ
ಸಿಹಿ ನೆನಪೇಕೋ ಮಾಸುತಿದೆ
ಕಹಿ ನೆನಪುಗಳ
ಛಾಪು ಎದ್ದು ಕಾಣುತಿದೆ
ಕಹಿ, ಸಿಹಿ ನೆನಪ
ಮೂಡಿಸಿದ ಲೇಖನಿ ಒಂದೇ
ಸಿಹಿ ನೆನಪುಗಳದೇಕೋ
ಮಾಯವಾಗುತಿಹುದಲ್ಲ!
ಕೊನೇ ಎರ್ಡ್ ಪ್ಯಾರ ಅರ್ಥ ಆಗ್ಲಿಲ್ಲ ಅದಿಕ್ಕೆ ಇಲ್ಲಿಗೇ ನಿಲ್ಸಿದೆ 🙂
[ನಿಮ್ಮ ಭಾವನೆ ಕದ್ದ ಘೋರ ಅಪರಾಧಕ್ಕೆ ಕ್ಷಮೆಯಿರಲಿ]
ಪ್ರತಿಕ್ರಿಯೆ by ಪಾಲ — ಏಪ್ರಿಲ್ 14, 2009 @ 8:18 ಅಪರಾಹ್ನ |
good blog, interesting writings.. liked it…
thank u..
ಪ್ರತಿಕ್ರಿಯೆ by ವಿ.ರಾ.ಹೆ — ಸೆಪ್ಟೆಂಬರ್ 21, 2009 @ 2:02 ಅಪರಾಹ್ನ |