ಟೈಂ ಪಾಸ್ ಬರಹಗಳು

ಆಗಷ್ಟ್ 22, 2008

ಮೌನ

Filed under: kavana — saagari @ 11:00 ಫೂರ್ವಾಹ್ನ

ನೋಡದಾಗ ಮಾತಾಡಿದ್ದೆಷ್ಟು ಆಸೆ ಕನಸು ಹೆಣೆದಿದ್ದೆಷ್ಟು
ಕಣ್ಮುಂದೆ ಬಂದಾಗ ನೀನು ಅದೇಕೋ ನೀರವ ಮೌನ
ಸಖರು ನಾವಿಬ್ಬರೂ ನೋವು ನಲಿವ ಸಹಭಾಗಿಗಳು
ಹೇಗಿದ್ದೀಯಾ ಎಂದಿಂದು ಕೇಳಲೂ ಬಿಡದೀ ಮೌನ

ವರನೊಬ್ಬನ ಹುಡುಕಾಟದಲ್ಲಿ ಮನೆಯವರು ಇರುವಾಗ
ನಾನಾಗಲೆಂದೆನ್ನ ನೀನು ಕೇಳಲೇಕೆ ಬಿಡದು ಮೌನ ?
ನೀನೆನ್ನ ಆಪ್ತ ಗೆಳೆಯ ಎಂದು ನಾನು ಅಂದಾಗ
ಹೌದೆನ್ನುವ ಬದಲು ನೀನೇಕೆ ವಹಿಸಿದೆ ಮೌನ ?

ಯಾರೆಂದರು ನಾರಿಮನವ ಅರಿಯಲಾಗದು
ಶುದ್ಧ ಸುಳ್ಳದು ಎಂದು ಹೇಳುವೆ ನಾನಿಂದು
ನಿನ್ನ ಮೌನದ ಭಾಷೆ ನನಗೆ ಅರ್ಥವಾಗದು
ಮೌನವನರ್ಥೈಸುವ ಸಾಹಸ ಬಹು ದೊಡ್ಡದು

ಕಾಣುತಿದೆ ನಿನ್ನ ಕಂಗಳಲ್ಲಿ ಕಾಂತಿಯೊಂದು ಹೊಸ ಥರ
ಅದನೋಡಿದೆನ್ನ ಮನ ನಡುಗುತಿದೆ ಥರ ಥರ
ಕಾಯಿಸುತಿರುವೆ ನೀನು ಇಂದು ಅದೇಕೆ ಈ ಥರ
ಕಾಡಿಸದಿರು ನೀ ಹಾಡಿ ಹೇಳಲೊಂಥರಾ ಥರಾ !

ನನಗೆ ಒಬ್ಬರು ಚಾಲೆಂಜ್ ಮಾಡಿದ್ದರು..ನೀನು ಜನ್ಮದಲ್ಲಿ ಸೈಲೆಂಟಾಗಿರಕ್ಕಾಗಲ್ಲ, ಮತ್ತೆ silence ಬಗ್ಗೆ ಕವನ ನ ಬರ್ಯಕ್ಕೂ ಆಗಲ್ಲ ಅಂತ ! ಆದ್ದರಿಂದ ನಾನು silent ಆಗಿರೋದನ್ನ practice ಮಾಡ್ತಾ , one of the dimensions of silence ನ concept ಆಗಿ ಇಟ್ಕೊಂಡು ಕವನ ಬರ್ದಿದಿನಿ…
ಟೈಮ್ ಪಾಸಿಗಷ್ಟೆ…ನಿಜ ಅಂತೆಲ್ಲ ಅಂದುಕೋಬೇಡಿ ಯಾರು !

5 ಟಿಪ್ಪಣಿಗಳು »

 1. ಒಳ್ಳೆ ಪ್ರೇಮಕವಿತೆ…

  ಪ್ರತಿಕ್ರಿಯೆ by Srikanth - ಶ್ರೀಕಾಂತ — ಆಗಷ್ಟ್ 22, 2008 @ 1:54 ಅಪರಾಹ್ನ | ಉತ್ತರ

 2. oLLe mouna.

  ಪ್ರತಿಕ್ರಿಯೆ by Parisarapremi — ಆಗಷ್ಟ್ 22, 2008 @ 2:32 ಅಪರಾಹ್ನ | ಉತ್ತರ

 3. ಸಾಗರಿಯವರೆ,
  ತುಂಬಾ ಚೆನ್ನಾಗಿದೆ.

  ಪ್ರತಿಕ್ರಿಯೆ by ಅಂತರ್ವಾಣಿ — ಆಗಷ್ಟ್ 24, 2008 @ 7:07 ಅಪರಾಹ್ನ | ಉತ್ತರ

 4. ನಿಜ ಅಂತೆಲ್ಲ ಅಂದುಕೋಬೇಡಿ ಯಾರು !….
  idralle gottagutte nija enoo antha ;-)….

  ಪ್ರತಿಕ್ರಿಯೆ by Sridhar — ಅಕ್ಟೋಬರ್ 19, 2008 @ 9:44 ಅಪರಾಹ್ನ | ಉತ್ತರ

 5. >>ನಿಜ ಅಂತೆಲ್ಲ ಅಂದುಕೋಬೇಡಿ ಯಾರು !
  ಆಯ್ತು ಅಂದುಕೊಳ್ಳೊಲ್ಲ,, ಆದ್ರೂ ಅನುಭವಿಸಿ ಬರ್ದಂಗೆ ಇದೆ..

  ಪ್ರತಿಕ್ರಿಯೆ by palachandra — ಫೆಬ್ರವರಿ 18, 2009 @ 5:40 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

%d bloggers like this: