ಮಳೆ ಕೆಲವರಿಗೆ romantic, ಕೆಲವರಿಗೆ irritating, ಮತ್ತೊಬ್ಬರಿಗೆ ಮತ್ತಿನ್ನೇನೊ! ಆದರೆ ನಾನು ಚಾರ್ಲಿ ಚಾಪ್ಲಿನ್ ಅವರ ಮಾತನ್ನು ಅನುಮೋದಿಸುತ್ತೇನೆ. ಮಳೆ ಬಂದಾಗ ನಾವು ಅತ್ತರೆ ಯಾರಿಗೂ ಕಾಣುವುದಿಲ್ಲ ಅನ್ನುವ ಅವರ ಮಾತು ತುಂಬಾ ನಿಜ. ನಾನು ಅಳುವುದು ಇಂಥಾ ಸಂದರ್ಭಗಳಲ್ಲಿಯೇ.
ಅನಿರೀಕ್ಷಿತ ಮಳೆಯಾದರೆ ಸಂದರ್ಭ ತಂತಾನೆ ಒದಗಿ ಬಂದಹಾಗಾಗುತ್ತೆ. ದಿನಗಟ್ಟಲೆ ತಡೆದಿಟ್ಟುಕೊಂಡಿರುವ ಯಾರದೋ ಮೇಲಿನ ಸಿಟ್ಟು, ಫಲಕೊಡದ ನನ್ನ ಪಾಕಪ್ರಯೋಗಗಳು, ಬ್ಲಾಗ್ ಅಪ್ಡೇಟ್ ಮಾಡಲು ಹೊರಟಾಗ ಡೌನಾಗುವ ಸರ್ವರ್ರು..ಇವೆಲ್ಲದರ ಮೇಲೆ ನಾನು ಆಗಾಗಲೇ ಕಿರ್ಚಾಡಿದರೆ ಜನ ಹುಬ್ಬೇರಿಸುತ್ತಾರೆ…ಶಾಂತ ಸ್ವಭಾವದವರು ಹೀಗೆ ಜ್ವಾಲಾಮುಖಿಯಂತೆ ಹೇಗಾದರಪ್ಪಾ ಅಂತ.ಅದಕ್ಕೆ ಯಾರ್ಗೂ ಗೊತ್ತಾಗ್ದೆ ಇರೋ ಹಾಗೆ ಅಳ್ಬೇಕು ಯಾವಾಗ್ಲು. ನಮ್ಮ ಅಳು, ದುಃಖ ಮತ್ತು ಕೋಪದ ಕಾರಣ ಕೇಳುವಷ್ಟು ವಿವೇಕಿಗಳಾಗಿಲ್ಲ ಜನ ಇನ್ನು…ಕೋಪಕ್ಕೆ ಕೋಪವೇ ಉತ್ತರ ಅಷ್ಟೆ ಅನ್ನೋ ಲೆವೆಲ್ಲಲ್ಲೇ ಇದಾರೆ…ಇರ್ಲಿ ಪಾಪ…ಇಷ್ಟಾ ಬಂದಾಗ ಮೇಲೆ ಬರ್ಲಿ ಜನ.No compulsion.
ಮಳೆ ನೋಡ್ತಾ ಅಳೋದು ಒಂಥರಾ. ಆಗ ಮನೆಯಲ್ಲಿ ಯಾರೂ ಇರ್ಬಾರ್ದು. ಮಳೆ ಥರಾನೆ ನಾವು ಒಂದೇ ಸಮ ಅತ್ತುಬಿಡಬೇಕು. ಗುಡುಗಿದಾಗ ಜಾಸ್ತಿ ಬಿಕ್ಕಳಿಸೋದು…ಮಿಂಚಿದಾಗ ಸಮಾಧಾನದ ನಗು ಬೀರೋದು ಇದೆಲ್ಲಾ ಆಗ್ಬೇಕು. ಆಗ್ಲೆ ಮಳೆಯ ಪ್ರಯೋಜ್ನ ಆಗೋದು.
ಇನ್ನೊಂದು ಮಳೇಲಿ ನೆನೆಯುತ್ತಾ ಅಳೋದು. ಇದು ನನ್ನ ಫೇವರೆಟ್. ಛತ್ರಿ ನಾಮ್ಕೆ ವಾಸ್ತೆ ಇಟ್ಕೊಳ್ಳೋದು. ದುಪಟ್ಟ ನ ಸ್ಕಾರ್ಫ್ ಹಾಗೆ ಸುತ್ತ್ಕೊಳ್ಳೋದು…ರಸ್ತೆಯ ನೀರಲ್ಲಿ ಟಪ ಟಪ ಕಾಲ್ ಹಾಕೋದು…ಬೇಕಂತಲೇ ಹೈ ಹೀಲ್ಡ್ ಚಪ್ಪಲಿ ಹಾಕಿ ಕಾಲ್ ಉಳುಕಿಸಿಕೊಳ್ಳೋದು…ಛತ್ರಿ ಮುಚ್ಚಿ, ಕಾಲ್ ಎಳೆದುಕೊಂಡು ಕುಂಟುತ್ತಾ ನಡೆಯೋದು. ಅದು ಅಳುವಿಗೆ ಸ್ಟಾರ್ಟಿಂಗ್ ಪಾಯಿಂಟು. ಕುಂಟುತ್ತಾ ಅತ್ಕೊಂಡ್ ಹೋಗ್ತೀವಲ್ಲಾ…ಸಾರ್ಥಕ ಅಳು ಅದು. ಜೀವನದಲ್ಲಿ ನಾವು ತಪ್ಪು ಬೇಕಂತಲೇ ಮಾಡಿರ್ತಿವೋ, ಗೊತ್ತಿಲ್ದೇ ಮಾಡಿರ್ತಿವೋ…ಎಲ್ಲಾ ಆವಾಗ್ಲೆ ನಮ್ಮ ಕೈಕೊಟ್ಟ ಹೀಲ್ಸ್ ಚಪ್ಪಲಿ ರೂಪದಲ್ಲಿ ನೆನಪಾಗ್ತವೆ. ನಮಗರಿವಿಲ್ಲದಂತೆಯೇ ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಿರುತ್ತೇವೆ.
ಇನ್ನು ನಾಸ್ಟಾಲ್ಜಿಯಾ ಅಳು. ಈ ಅಳುಗೆ ಮನೆಯ ಬಾಲ್ಕನಿ ಸರಿಯಾದ ಜಾಗ. ಬಾಲ್ಕನಿ ಇಲ್ದೇ ಇದ್ದೋರು ಅವರ ರೂಮಿನ ಕಿಟ್ಕಿಗೆ compromise ಮಾಡ್ಕೊಳ್ಳಿ. ಕೈಯಲ್ಲಿ ಒಂದು ಕಪ್ ಕಡಕ್ ಚಹಾ…(ಮಳೇಲಿ ಕಾಫಿ ರುಚಿಸೊಲ್ಲ…time tested ಸತ್ಯ ಇದು) ಹೆಗಲ ಮೇಲೆ ದಪ್ಪ ಕರ್ಚೀಫು.. ಉಯ್ಯಾಲೆಯೋ ಚೇರೋ ನೆಲವೋ..ಯಾವ್ದಾದ್ರು ಸರಿ..ಅದರಮೇಲೆ ಕೂತು… ಹಿಂದೆ ಯಾರೊಂದಿಗೋ ಕುಡಿದ ಕಾಫಿ/ಟೀ/ ಜ್ಯೂಸು ನೆನೆಸಿಕೊಂಡು ಸಂತೋಷಕ್ಕೋ ದುಃಖಕ್ಕೋ ಅಳೋದು…ಇನ್ನು ಆ ಸಮಯ ಬರಲ್ವಲ್ಲಾ…ಅಂತ. ಅಥ್ವಾ…ಇಂಥಾ ಮಳೆಲಿ ಅವನ/ಅವಳ ಜೊತೆ ಬಿಸಿಬಿಸಿಯಾಗಿ ಚಹಾ ಹೀರುತ್ತಾ ಬೆಚ್ಚಗೆ ಇರ್ಬಹುದಿತ್ತು… ನಾ ಹೋಗಲಾರದೇ/ ಅವಳು ಸಿಗಲಾರದೇ/ ಅವ ಕರೆಯದೇ/ ನಾನ್ ಕೇಳದೇ..ಅನ್ಯಾಯ ಮಳೆ ವೇಸ್ಟ್ ಆಗೋಯ್ತಲ್ಲಾ ಅನ್ನೋ ಜಿಗುಪ್ಸೆ…ಮೊಟ್ಟಮೊದಲ ಕ್ರಶ್ಷ್ಹು…ಅವ ಬೇರೆ ಹುಡ್ಗಿ ಗೊತೆ ಹೋದಾಗ ಆದ ಹಾರ್ಟ್ ಬ್ರೇಕು..ಮತ್ತೊಂದಿಷ್ಟು ಬ್ರೇಕಪ್ಪು ಪ್ಯಾಚಪ್ಪುಗಳು…ಪ್ರೊಪೋಸಲ್ , ರಿಜೆಕ್ಷನ್ ಗಳು…ಹ್ಮ್ಮ್ಮ್ಮ್ಮ್…ಇವೆಲ್ಲಾ ನೆನೆಸ್ಕೊಂಡ್ ಚೆನ್ನಾಗಿ ಅತ್ತುಬಿಡಬೇಕು…ಅಮೇಲೆ ತಪ್ಪದೆ ಶುಂಟಿ ಹಾಕಿದ ಚಹಾ ಕುಡಿಬೇಕು. ತಲೆ ನೋವಿದ್ದ್ರೆ ಮುಂದಿನ ಮಳೆಯಲ್ಲಿ ಅಳಕ್ಕೆ interest ಇರಲ್ಲ.
ಹೀಗೆ ಅತ್ತ ಮೇಲೆ ಯಾರಿಗೇನಾಗತ್ತೋ ಬಿಡತ್ತೋ, ನನಗಂತೂ ಒಂಥರಾ ಸಮಾಧಾನ ಆಗತ್ತೆ. ಮನುಷ್ಯರಿಗೆ ನನ್ನ ಮಾತು ಕೇಳುವ ವ್ಯವಧಾನ ಇದ್ಯೋ ಇಲ್ವೊ, ಆ ಪ್ರತ್ಯೊಂದು ಮಳೆಹನಿ ನನ್ನ ಮಾತು ಕೇಳಿಸಿಕೊಂಡ ಹಾಗಾಗತ್ತೆ ನನಗೆ. ಜನ ನನ್ನ ಮಾತನ್ನು ಮುಂದೆ ಹೊಗಳಿ ಹಿಂದೆ ತೆಗಳಬಹುದು…ಆದ್ರೆ ಈ ಮಳೆ ಹನಿಗಳು ನಿಶ್ಕಲ್ಮಷ. ಅವು ಸ್ಪಂದನೆಯ ಮುಖವಾಡ ಹಾಕೊಲ್ಲ, ನಿಜವಾಗಿಯೂ ಸ್ಪಂದಿಸುತ್ತವೆ. ಅವುಗಳ ಸ್ಪರ್ಶದಲ್ಲಿ ಅದೆಂಥದ್ದೋ ಮಮತೆ, ಅದೆಂಥದ್ದೋ ಸಾಂತ್ವನ. ಮನುಷ್ಯರು ತಿಪ್ಪರ್ಲಾಗ ಹಾಕಿದ್ರೂ ಕೊಡಕ್ಕಾಗಲ್ಲ ಇಂಥಾ ಸಂತ್ವಾನ ನ.
ನನಗೆ ಮಳೆಯಲ್ಲಿ ಯಾಕಪ್ಪಾ ಅಳಾಬೇಕು ಅನ್ನಿಸತ್ತೆ ಅಂದ್ರೆ ಮೇಲಿಂದ ಕೆಳಗೆ ಬಿದ್ದು ಒಡೆದರೂ ಮಳೆ ಹನಿ ಮತ್ತೆ ಒಟ್ಟುಗೂಡಿ ಹನಿಯಾಗುತ್ತದೆ. ಇಂಥದ್ದೇ ಜಲಮೂಲಗಳ ಆಸೆಯಿಲ್ಲದೇ ಎಲ್ಲದರಲ್ಲೂ ಒಂದೇ ಭಾವದಿಂದ ಒಡಗೂಡುತ್ತದೆ. ಮಣ್ಣಿಗೆ ಹೋದರೂ ಕೆಳಗೆ ಸೇರಿ ಮುಂದೆ ಬಾವಿಯಾಗುತ್ತದೆ. ಬದುಕಿನ ಹೋರಾಟದಲ್ಲಿ ಕಾದಾಡಿ ಸುಸ್ತಾದವರಿಗೆ ಮಳೆ ಹೋರಾಟ ಮುನ್ನಡೆಸಲು ಸಾಂತ್ವನಪೂರ್ವಕ ಚೈತನ್ಯ ನೀಡುತ್ತದೆ. ಇದನ್ನು ಅನುಭವಿಸಲಿಕ್ಕಾದರೂ ಮಳೆಯಲ್ಲಿ ಅಳಬೇಕು !
ನನ್ನನ್ನು ತುಂಬಾ ಜನ ಕೇಳುವುದುಂಟು..ನೀನು ಜನರ ಹತ್ತಿರ ಹೆಚ್ಚು ಭಾವನಾತ್ಮಕವಾಗಿಲ್ಲ, ಸಖತ್ practical. ಕಡ್ಡಿ ತುಂಡಾದ ಹಾಗೆ ಮಾತಾಡ್ತೀಯ. ಆದ್ರೆ ಪ್ರಕೃತಿಯ ಹತ್ತಿರ ಹೆಚ್ಚು ಭಾವನಾತ್ಮಕವಾಗಿರ್ತಿ…ಯಾಕೆ ಅಂತ. ನಾನನ್ನುವೆ – ” Earth deserves emotions, world does not ” ಅಂತ. ಇದು ಅರ್ಥವಾಗಬೇಕಿದ್ದರೆ ಒಮ್ಮೆ ಮಳೆಯಲ್ಲಿ ಅಳಬೇಕು !
PS : Quote ನನ್ನದು…ಕಾಪಿರೈಟ್ ಇದೆ ಅದಕ್ಕೆ 🙂
ಹದಿನಾರಾಣೆ ನಿಜ.. ನನಗೂ ಮಳೆಯಲ್ಲಿ ನಿಂತು, ಪೂರ್ತಿ ತೊಯ್ದು, ಮನಸ್ಸಿನ ದುಖವೆಲ್ಲಾ ಕಿತ್ತೊಗುವಂತೆ ಒಮ್ಮೆ ಅಳುವ ಆಸೆ. ಇವತ್ತಿನವರೆಗೂ ಅದು ಆಗಿಲ್ಲಾ. ಮನಸ್ಸಿನಲ್ಲಿ ದುಖವಿಲ್ಲಾ ಅಂತಲ್ಲ, ಬೇಕಾದಷ್ಟು ಇದೆ, ಆದ್ರೆ, ಮಳೆ, ದುಖ, ತೊಯ್ದು ಜೋರಾಗಿ ಅಳುವ ಮುಹೂರ್ತ ಇನ್ನೂ ಕೂಡಿ ಬಂದಿಲ್ಲ ಅಷ್ಟೆ.
ಹೇಳಲಾರದ ಮನಸ್ಸಿನ ಸಂಕಟ ಹೀಗೆ ಕಳೆದುಹೋಗಬಹುದೇನೋ ?
ಏನಂತೀರಾ ಸಾಗರಿಯವರೇ?
ಕಟ್ಟೆ ಶಂಕ್ರ
ಪ್ರತಿಕ್ರಿಯೆ by Shankar Prasad — ನವೆಂಬರ್ 28, 2008 @ 1:41 ಫೂರ್ವಾಹ್ನ |
ನಿಜ ಶಂಕರ್ ಅವರೇ..ಹೇಳಲಾರದ ಸಂಕಟವನ್ನೆಲ್ಲ ಮಳೆಗೆ ಅಳುವಿನ ಮುಖಾಂತರ ಮಾತ್ರ ಹೇಳಲು ಸಾಧ್ಯ . ನಾನು ಇದನ್ನ try ಮಾಡಿ ಯಶಸ್ವಿಯಾಗಿದ್ದೀನಿ. ನೀವೂ ಟ್ರೈ ಮಾಡಿ.
ಪ್ರತಿಕ್ರಿಯೆ by saagari — ನವೆಂಬರ್ 28, 2008 @ 10:36 ಫೂರ್ವಾಹ್ನ |
ಪಾಪ ಮಳೆ. ಸೀ ನೀರಿಗೆ ಉಪ್‍ನೀರು ಬೆರೆಸಿದ ಹಾಗೆ!!
ಅಲ್ಲಾ, ಚಾರ್ಲ್ಸ್ ಚಾಪ್ಲಿನ್ ಮಳೇಲಿ ಅಳ್ತಾ ಇದ್ರು. ಆದ್ರೆ ತೀರಾ ಕಾಲ್ ಉಳುಕಿಸಿಕೊಳ್ಳೋ ಐಡಿಯಾ ಎಲ್ಲಾ ಯಾಕೆ ಅಂತ?? ಮಳೆಯಲ್ಲಿ ನೆನೀಬೇಕು ಅಂದ್ರೆ ಹೋಗಿ ನಿಂತ್ಕೊಂಡು ನೆನೀಬೇಕಪ್ಪ.
ಗುಡುಗಿದಾಗ ಬಿಕ್ಕಳಿಸು, ಮಿಂಚಿದಾಗ ನಗ್ತಾ ನಿಂತಿರು… ಸಿಡಿಲು ಹೊಡೆದಾಗ ಗೊತ್ತಾಗುತ್ತೆ!!! 😉
ಇರಲಿ,
ಮಳೆ ಬರಲಿ ಅಂತ ಕೆಲವರು ಅಳ್ತಾರೆ, ಮಳೆ ನಿಲ್ಲಲಿ ಅಂತ ಇನ್ನು ಕೆಲವರು.. ನೀನು ಮಳೆಯಲ್ಲೇ ಅಳೋ ಸ್ಕೀಮು ಹಾಕಿದ್ದೀಯ. ಯಾಕೆ ಮೂರು ದಿನವಾದರೂ ಬೆಂಗಳೂರಿನಲ್ಲಿ ಮಳೆ ನಿಂತಿಲ್ಲ ಅಂತ ಈಗ ಗೊತ್ತಾಯಿತು.. ಇದು ಬರೀ ಮಳೆ ನೀರಲ್ಲ!! ನೀನು ಒಂದು ಕೆಲ್ಸ ಮಾಡು, ಮಳೆಗಾಲದಲ್ಲಿ ಎತ್ತಿನಭುಜದ ಮೇಲೆ ಬಿಡಾರ ಹೂಡಿಬಿಡು.
ಪ್ರತಿಕ್ರಿಯೆ by Parisarapremi — ನವೆಂಬರ್ 28, 2008 @ 11:22 ಅಪರಾಹ್ನ |
ಸಾಗರಿ,
ಹೃದಯಕ್ಕೆ ಮುಟ್ಟುವಂತಹ ಲೇಖನ.
ಪ್ರತಿಕ್ರಿಯೆ by ಅಂತರ್ವಾಣಿ — ನವೆಂಬರ್ 28, 2008 @ 11:45 ಅಪರಾಹ್ನ |
ಮಳೇಲಿ ಕಾಫಿ ರುಚಿಸೊಲ್ಲ…time tested ಸತ್ಯ ಇದು..
yavan ree heLidd nimge?? idrinda neevu “kaapi” bagge malathaayi dhoraNe torstideera antha gottaagutte…hmmm
aadroo maLeli aLo badlu naalku meNsinkaay bajji tinkond banni…friends jotey….aLakke time iralla aaga… 🙂
ಪ್ರತಿಕ್ರಿಯೆ by Sridhar — ನವೆಂಬರ್ 30, 2008 @ 10:44 ಫೂರ್ವಾಹ್ನ |
ಸಾಗರಿ,
ತುಂಬಾ ಆಸಕ್ತಿಕರವಾಗಿದೆ. ವಿಭಿನ್ನ ದೃಷ್ಟಿಕೋನ ನಿಮ್ಮದು. ಈ ಸಲದ ಮಳೆಗಾಲದಲ್ಲಿ ನಾನೂ ಟ್ರೈಮಾಡ್ಬೇಕು 🙂 ಆಗಾಗ ಅತ್ತರೆ ಅದೆಷ್ಟೋ ದುಗುಡಗಳು ಮನದಿಂದ ಮರೆಯಾಗುತ್ತವೆಯಂತೆ. ಒಳ್ಳೆಯ ಉಪಾಯವನ್ನೇ ಕೊಟ್ಟಿದ್ದೀರಾ.. ಥ್ಯಾಂಕ್ಸ್ 🙂
ಪ್ರತಿಕ್ರಿಯೆ by Tejaswini — ಡಿಸೆಂಬರ್ 4, 2008 @ 5:00 ಅಪರಾಹ್ನ |
ಬರೆದಿದ್ದು ಇಷ್ಟವಾಯಿತು ; ಮಳೆ ನಿಸರ್ಗದ ಅದ್ಭುತಗಳಲ್ಲೊಂದು ; ನನಗೆ ಊರಿನಲ್ಲಿ
ಅಡಿಕೆ-ತೆಂಗಿನ ಮರಗಳ ಮಧ್ಯೆ ಸುರಿಯುವ ಮಳೆ ನೋಡುವುದಕ್ಕೆ ಇಷ್ಟ ; ಇಲ್ಲಿ ಬೆಂಗಳೂರಿನಲ್ಲಿ ಮಳೆ ಅಷ್ಟು ಖುಷಿ ನೀಡುವುದಿಲ್ಲ.
ಪ್ರತಿಕ್ರಿಯೆ by greeshma — ಡಿಸೆಂಬರ್ 10, 2008 @ 5:10 ಅಪರಾಹ್ನ |
ಸಾಗರಿಯವರೆ ನಿಮ್ಮ ಆಲೋಚನಾ ಲಹರಿ ಬಹಳ ಭಿನ್ನವಾಗಿದೆ. ನನಗಂತೂ ಮೋಡ ಮುಚ್ಚಿಕೊಂಡಿದ್ದರೆ, ಮಳೆ ಪ್ರಾರಂಭವಾದರೆ ಮೂಡ್ ಆಫ್ ಆಗಿಬಿಡುತ್ತದೆ. ಬಿಸಿಬಿಸಿ ಕಾಫಿ ಕುಡಿದರೆ ಚೇತನ ಬರುತ್ತದೆ. ಆದರೆ ಮಳೆ ಬಂದಾಗ ಮನೆಯ ಹೊರಗಿದ್ದರೆ ಅಷ್ಟೊಂದು ಬೇಸರವಾಗಲ್ಲ.ಮಳೆ ನನ್ನಲ್ಲಿinsecure feeling ತರುತ್ತದೆ. ನಮ್ಮವರು ನನಗೆ ತದ್ವಿರುದ್ಧ. ಮಳೆ ಅವರಿಗೆ ಜೀವನಾಡಿ
ಪ್ರತಿಕ್ರಿಯೆ by ಚಂದ್ರಕಾಂತ — ಡಿಸೆಂಬರ್ 15, 2008 @ 5:52 ಅಪರಾಹ್ನ |