ಟೈಂ ಪಾಸ್ ಬರಹಗಳು

ಅಕ್ಟೋಬರ್ 10, 2008

ಟೆರೇಸು

Filed under: kavana — saagari @ 11:17 ಅಪರಾಹ್ನ

ಕಾಂಕ್ರೀಟು ಕಾಡಿನಲ್ಲಿ ಜೀವನ ಸಾಕಾಗಿ

ಹೊರಹೋಗಲೂ ಆಗದೆ ಕಟ್ಟಿ ಹಾಕಿದಂತಾಗಿ

ಮನಸ್ಸು ಚಿಂತೆಯಲ್ಲಿ ಚಿತೆಯಾಗಿರುವಾಗ

ಟೆರೇಸೇ ನಮ್ಮ  ಏಕಾಂತದ ಜಾಗ

ನೆನಪಿನ ದೋಣಿಗೆ ಅಂಬಿಗ ಟೆರೇಸು

ಹುಟ್ಟು ಹಾಕುವುದರಲ್ಲಿ ಸ್ಪೀಡ್ ಪೇಸು

ಒಬ್ಬನೇ ಪಯಣಿಗನಿದ್ದರೆ ಲೇಸು

ಕೊಡಬೇಕಿಲ್ಲ ಇದಕ್ಕೆ ಯಾವುದೇ ಫೀಸು !

ವ್ಯಾಯಾಮವಿರಲಿ ಬೆಳದಿಂಗಳೂಟವಿರಲಿ

ಸಂಡಿಗೆಗಳ ಮಾಡಿ ಒಣಗಿಸಲಿಕ್ಕಾಗಲಿ

ಮನೆಯಲ್ಲಿ ಶುಭಕಾರ್ಯ ಯಾವುದೇ ಬರಲಿ

ಟೆರೇಸಿಗಿಂತ ಪ್ರಶಸ್ತ ಜಾಗ ಬೇಕೇ ಹೇಳಿ ?

ಈಗೀಗ ಹೆಚ್ಚುತ್ತಿದೆ ಅಪಾರ್ಟ್ಮೆಂಟ್ ಅಬ್ಬರ

ಕಡಿಮೆಯಾಗುತ್ತಿದೆ ಟೆರೇಸಿನ ಮರ್ಮರ

ಟೆರೇಸಲ್ಲಿ ನಿಂತು ಚಂದ್ರನ ನೋಡದವರ

ಜೀವನ ನಿಜವಾಗಿಯೂ ಮಹಾದುಸ್ತರ.

ಈ ಕವನ ಬರೆಯಲು ಒಂದು ಕಾರಣ ಇದೆ. ನಮ್ಮ ಮನೆಯ ಇಕ್ಕೆಲಗಳಲ್ಲೂ ನಾಲ್ಕು ನಾಲ್ಕು ಅಂತಸ್ತಿನ ಮನೆಗಳು ಬಂದು ನನಗೆ ಸೂರ್ಯ ಚಂದ್ರರನ್ನೂ ನೋಡದ ಹಾಗಾಗಿದೆ. ಕೋಲು ಬಿಸಿಲೂ ಕಾಣದಾಗಿದೆ. ನಮ್ಮ ಮನೆಯ ಟೆರೇಸು ನನ್ನ favourite  ಜಾಗ. ಈಗ ಅಲ್ಲಿ ಹೋಗದ ಹಾಗೆ ಆಗೋಗಿದೆ. ಹೋದರೆ ಮನೆಗಳಲ್ಲಿ, ವಟ ವಟಾ..ಡಬ ಡಬ ಶಬ್ದ…ಶಾಂತಿಯೇ ಇಲ್ಲ !! ನನ್ನ ಆಲೋಚನೆ, ಆತ್ಮಾವಲೋಕನಕ್ಕೆ ಇದ್ದ ಏಕೈಕ ಜಾಗವನ್ನು ನನ್ನಿಂದ ಕಿತ್ತುಕೊಂಡ hopeless  ನಗರೀಕರಣದ ಬಗ್ಗೆ ನನಗೆ ಜಿಗುಪ್ಸೆ ಬಂದಿದೆ. ಅದಕ್ಕೆ ಇದನ್ನ ಬರ್ದಿದಿನಿ.

5 ಟಿಪ್ಪಣಿಗಳು »

 1. ಮನೆ ಟೆರೇಸು.. ನಿಜಕ್ಕು ಒಳ್ಳೆ ಜಾಗ..

  ಈ ಟೆರೇಸು ಚೆನ್ನಾಗಿದೆ. ಇಂದಿನ ಸ್ಥಿತಿಯನ್ನು ಚೆನ್ನಾಗಿ ಬರೆದಿದ್ದೀಯ.

  ಪ್ರತಿಕ್ರಿಯೆ by ಅಂತರ್ವಾಣಿ — ಅಕ್ಟೋಬರ್ 10, 2008 @ 11:22 ಅಪರಾಹ್ನ | ಉತ್ತರ

 2. oLLe dustara.

  ಪ್ರತಿಕ್ರಿಯೆ by Parisarapremi — ಅಕ್ಟೋಬರ್ 11, 2008 @ 9:21 ಫೂರ್ವಾಹ್ನ | ಉತ್ತರ

 3. @arun : oLLe comment -u…

  ಪ್ರತಿಕ್ರಿಯೆ by Sridhar — ಅಕ್ಟೋಬರ್ 19, 2008 @ 9:46 ಅಪರಾಹ್ನ | ಉತ್ತರ

 4. ನಗರೀಕರಣವು ಮನುಷ್ಯರನ್ನು dehumanise ಮಾಡುತ್ತಿದೆ.

  ಪ್ರತಿಕ್ರಿಯೆ by sunaath — ಅಕ್ಟೋಬರ್ 28, 2008 @ 4:37 ಅಪರಾಹ್ನ | ಉತ್ತರ

 5. @ antarvaani
  ಧನ್ಯವಾದಗಳು.

  ಪರಿಸರಪ್ರೇಮಿ:
  ಸರಿ.

  ಶ್ರೀಧರ್:
  ok.

  ಸುನಾಥ್:
  ತುಂಬಾ ನಿಜ.

  ಪ್ರತಿಕ್ರಿಯೆ by saagari — ಅಕ್ಟೋಬರ್ 29, 2008 @ 8:24 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

%d bloggers like this: