ದಿನಕಳೆದಂತೆ ಅನಿಸುತಿದೆ ತಾಯಿಗೆ
ತನಗೀಗ ವಯಸ್ಸಾಗಿದೆ.
ದಿನಕಳೆದಂತೆ ಅನಿಸುತಿದೆ ತಂದೆಗೆ
ಈ ಬದುಕು ಸಾಕಾಗಿದೆ.
ಹಿಂದೊಮ್ಮೆ ಏನೆಲ್ಲಾ ಮಾಡುತ್ತಿದ್ದೆ
ಎಲ್ಲಾ ಒಬ್ಬಳೇ ನಿಭಾಯಿಸುತ್ತಿದ್ದೆ
ಇಂದು ಸಹಾಯಬೇಡಬೇಕಾಯ್ತೇ ?
ಎಂದು ತಾಯಿಯ ಚಿಂತೆ .
ವರ್ಷಗಟ್ಟಲೆ ದುಡಿದು ದುಡಿದು
ಮನೆಯ ಊರುಗೋಲಾಗಿದ್ದವನಿಗೆ
ಇತ್ತೀಚಿನ ದಿನಗಳಲ್ಲಿ ಯಾಕೋ
ಊರುಗೋಲು ಅವಶ್ಯಕವಂತೆ !
ಮಕ್ಕಳು ಸಹಾಯ ಮಾಡಿದರೆ
ಇವರಿಗೆ ಪಡೆಯಲು ಸಂಕೋಚ.
ಸಂಕೋಚವೆಂದು ಮಾಡದೇ ಇರಲಿ,
ಮುಳುಗೇ ಹೋಯ್ತು ಪ್ರಪಂಚ!!
ಇವರ ಭಾವನೆಯ ಅರ್ಥೈಸಲು
ಆಗದ ಮಕ್ಕಳು ದಿಕ್ಕೆಟ್ಟರು.
ಅಂದುಕೊಂಡರು ಇವರು
ನಮಗಿವರು ಚಟ್ಟವನ್ನೂ ಕಟ್ಟರು !
ಬೇಡ ಬೇಡವೆಂದರೂ
ತಡೆಯಲಾಗದು ವೃದ್ಧಾಪ್ಯ,
ಬಾಲ್ಯ ಯೌವನವಾದಮೇಲೆ
ಬರಲೇಬೇಕು ವಾರ್ಧಕ್ಯ !
ಸಾಗರಿ,
ನಿಮ್ಮ ಕವನ ಸೊಗಸಾಗಿದೆ. ಒಳ್ಳೆ ವಿಚಾರ ಕುರಿತು ಬರೆದಿದ್ದೀರ.
ಪ್ರತಿಕ್ರಿಯೆ by ಅಂತರ್ವಾಣಿ — ಸೆಪ್ಟೆಂಬರ್ 27, 2008 @ 11:20 ಅಪರಾಹ್ನ |
simple in words but effective in thoughts…
good work..
keep it up.
ಪ್ರತಿಕ್ರಿಯೆ by PRAWIN — ಸೆಪ್ಟೆಂಬರ್ 28, 2008 @ 10:55 ಫೂರ್ವಾಹ್ನ |
ಒಳ್ಳೇ ವಾರ್ಧಕ್ಯ. ಇದನ್ನು ವಾರ್ಧಕ ಷಟ್ಪದಿಯಲ್ಲಿ ಬರೆಯಬೇಕಿತ್ತು.. 😉
ಪ್ರತಿಕ್ರಿಯೆ by Parisarapremi — ಸೆಪ್ಟೆಂಬರ್ 29, 2008 @ 9:11 ಅಪರಾಹ್ನ |