15-04-2006 ರಂದು ಬರೆದ ಕವನ ಇದು. ಇವತ್ತು ಸಿಕ್ಕಿತು. ಸಿಕ್ಕಾ ಪಟ್ಟೆ editing ಮಾಡಿ ಇದನ್ನ ಇಲ್ಲಿ ಹಾಕಿದಿನಿ. once again, time pass ಗೆ ! ಎಂಥಾ ದೊಡ್ಡ ಮನುಷ್ಯಳೆಂದರೆ ನಾನು….ಕವನಕ್ಕೆ ಟೈಟಲ್ಲೇ ಬರ್ದಿರ್ಲಿಲ್ಲ…ಈಗ ಎಷ್ಟು ತೋಚಿದರೂ ಒಂದು ಟೈಟಾಲ್ಲೂ ಹೊಳೀತಿಲ್ಲ. ಯಾರಾದರೂ ಒಂದು ಒಳ್ಳೆ ಟೈಟಲ್ಲು ಸಜ್ಜೆಸ್ಟ್ ಮಾಡಿ ಪುಣ್ಯ ಕಟ್ಟಿಕೊಳ್ಳಿ !
ನಾ ಆವಿಯಂತೆ ಮೇಲೇರಿದೆ, ಬಾನಾಗಿ ನೀನೆನ್ನ ಪೊರೆದೆ
ನಾ ದಿಕ್ಕುದಿಕ್ಕಲ್ಲಿ ಓಡಿದೆ, ನನ್ನ ಸ್ವೇಚ್ಛೆಗೆ ನೀ ತಡೆಯೊಡ್ಡದೆ ಇದ್ದೆ.
ನನ್ನ ಆರ್ಭಟದಿಂದಾಯ್ತು ಧರಣಿದೇವಿಗೆ ದಿಗಿಲು
ಎಲ್ಲಿ ಕೊಚ್ಚಿ ಹೋಗುವವೋ ಅವಳ ಕಂದಮ್ಮಗಳು
ನನ್ನ ಪ್ರತಾಪ ಹೆಚ್ಚುತ್ತಿದ್ದರೂ ನೀ ಸುಮ್ಮನಿದ್ದೆ
ಏರಲು ನನ್ನಟ್ಟಹಾಸ ನೀನೊಮ್ಮೆ ಗುಡುಗಿದ್ದೆ
ನಿನ್ನ ಮುನಿಸ ನೋಡಿ ಸರಿಹೋಗಲಿಲ್ಲ ನಾನು
ಗರ್ವದಲ್ಲಿ ನನ್ನಾಯುಷ್ಯವ ಮರೆತುಬಿಟ್ಟೆ ನಾನು
ಏರುತ್ತ ಮೇಲೆ ಮರೆಯುತ್ತ ಎಲ್ಲರನು
ಏಣಿಯ ಹತ್ತುತ್ತಾ ಮರೆಯುತ್ತ ಕಾಲ್ಗಳನು
ಆಸೆ ಅಪರಿಮಿತ ಅಹಂಕರವು ತಾನಗಾಧ
ಅಂತ್ಯಗೊಳಿಸಿಬಿಡುತ್ತದೆ ಕಾಲವೆಂಬ ಆಯುಧ
ಕುಗ್ಗಲು ನನ್ನ ಯೌವ್ವನ ಕಪ್ಪಗಾದೆ ನಾನು
ಮಿಂಚಿನ ನಿನ್ನ ನಗೆಯಿಂದ ಎದೆಯ ಚುಚ್ಚಿದೆ ನೀನು
ಮೇಲೇರಿದರೇನು ಕೆಳಗಿಳಿಯುವುದೆಂದೆ ನೀನು
ಅಳಿಸಿ ನನ್ನಹಂಕಾರವ ಪಾಠ ಕಲಿಸಿದೆ ನೀನು
ಓ ಅನಂತವೇ ಕೊಡು ಎನಗೆ ಶಕ್ತಿ
ನನ್ನ ಹತೋಟಿಯಲ್ಲಿರಲಿ ನನ್ನ ಯುಕ್ತಿ
ಇರಲೆಂದಿಗೂ ಸದಾ ನಿನ್ನಲ್ಲಿ ಅಚಲ ಭಕ್ತಿ
ಅಳಿಸೆನ್ನ ಅಹಂಕಾರವ, ಸಿಗಲಿ ಎನಗೆ ಮುಕ್ತಿ !
Nangu enu title hoLithilla.. 😉
Sakath timepass aithu adre..
ಪ್ರತಿಕ್ರಿಯೆ by Radha — ಆಗಷ್ಟ್ 11, 2008 @ 6:15 ಅಪರಾಹ್ನ |
ಹೊ!
ತುಂಬಾ ಚೆನ್ನಾಗಿದೆ ಮಾ.
ಕವಿತೆಯ ವಸ್ತುವಿನಲ್ಲಿ ನೀರು ಹಾಗು ನರರ ಜೀವನವನ್ನು ಹೇಳಿದ್ದೀಯ.
ಪ್ರತಿಕ್ರಿಯೆ by ಅಂತರ್ವಾಣಿ — ಆಗಷ್ಟ್ 14, 2008 @ 6:20 ಅಪರಾಹ್ನ |
ದೈವದೆದುರು ದೀನ 🙂
ಕವನ ಬಹಳ ಚೆನ್ನಾಗಿ ಮೂಡಿದೆ
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
ಪ್ರತಿಕ್ರಿಯೆ by ತವಿಶ್ರೀ — ಸೆಪ್ಟೆಂಬರ್ 27, 2008 @ 2:21 ಅಪರಾಹ್ನ |
“ಮರಳಿ ಮಣ್ಣಿಗೆ”?
ಪ್ರತಿಕ್ರಿಯೆ by sunaath — ಸೆಪ್ಟೆಂಬರ್ 27, 2008 @ 10:43 ಅಪರಾಹ್ನ |
ತುಂಬಾನೇ ಅರ್ಥ ಪೂರ್ಣವಾಗಿದೆ. ಪದ ಪುಂಜಗಳಲ್ಲಿ ಹಿಡಿತ ಕೊಂಚ ತಪ್ಪಿದ್ದರೂ ಹೇಳಲೇ ಬೇಕಾದ ವಿಷಯಗಳನ್ನು ತನ್ನದೇ ದಾಟಿಯಲ್ಲಿ ನಿರೂಪಿಸಿರುವ ಪರಿ ಅಮೋಘ. ನನಗೂ ಶೀರ್ಷಿಕೆ ಅಷ್ಟಾಗಿ ಹೊಳೆಯುತ್ತಿಲ್ಲ… ನನ್ನ ಪ್ರಕಾರ ” ಅರಿಕೆ” ಇದಕ್ಕೆ ಹೊಂದುತ್ತೆ.
ಯಾಕೆಂದರೆ… ನಿಮ್ಮ ಪರಿಧಿಯನ್ನು ಮೀರಿ ಉತ್ಕಟತೆಯಿಂದ ಮುನ್ನುಗ್ಗುತಿರುವ ನಿಮ್ಮ ತನಕ್ಕೆ ಅಪರಾಧಿ ಭಾವದಲ್ಲಿ ಒಂದು ಒದ್ದನ್ನು ಬೇಡುತ್ತಿದ್ದೀರ. ಅರಿಕೆ ನನ್ನ ಶೀರ್ಷಿಕೆ.
ಪ್ರತಿಕ್ರಿಯೆ by Aveen — ಮಾರ್ಚ್ 30, 2009 @ 12:22 ಅಪರಾಹ್ನ |