ಟೈಂ ಪಾಸ್ ಬರಹಗಳು

ಜುಲೈ 31, 2008

ಅಳಲು

Filed under: kavana — saagari @ 7:48 ಫೂರ್ವಾಹ್ನ

ಹಿಂದೆ ಯಾವತ್ತೋ ಬರೆದಿದ್ದ ಕವನ. ಇವತ್ತು ಕೈಗೆ ಸಿಕ್ಕಿತು…ಇಲ್ಲಿ ಹಾಕ್ತಿದ್ದೇನೆ..timepass ಗೆ !

ಅಳಲು
_________________________________________

ಸಾಗರವದೇನು ಅಲೆಯಿಲ್ಲದಿರಲು ?
ಕ್ಷೀರವದೇನು ಕೆನೆಯಿಲ್ಲದಿರಲು ?
ಆಗಸವದೇನು ರವಿ ಇಲ್ಲದಿರಲು ?
ನನ್ನ ಬಾಳದೇನು ನೀನಿಲ್ಲದಿರಲು ?

ದೇಗುಲವದೇನು ದೇವನಿಲ್ಲದಿರಲು ?
ದೀಪವದೇನು ತೈಲವಿಲ್ಲದಿರಲು ?
ದೇಹವದೇನು ಉಸಿರಿಲ್ಲದಿರಲು ?
ನನ್ನ ಮನಸದೇನು ನೀನಲ್ಲಿಲ್ಲದಿರಲು ?

ನಿನಗಾಗಿ ಕಾದಿರುವೆ ಹಗಲಿರುಳು
ನಾನು ನಾನಲ್ಲ ನೀನಿಲ್ಲದಿರಲು
ನಾನು ಉಳಿಯೊಲ್ಲ ನೀ ಬಾರದಿರಲು
ಇನ್ನಾದರೂ ಕೇಳು ನೀ ನನ್ನೀ ಅಳಲು !

2 ಟಿಪ್ಪಣಿಗಳು »

  1. ಯಾರಯ್ಯ ನೀನು? ಎಲ್ಲಿದ್ದೀಯಾ? ಬೇಗ ಬಾ.. ಅಳುತ್ತಾಯಿದ್ದಾಳೆ…

    ಹೇಳೀದ್ದೀನಿ ಮ. ಬರುತ್ತಾನೆ Dont worry 🙂

    ಪ್ರತಿಕ್ರಿಯೆ by ಅಂತರ್ವಾಣಿ — ಆಗಷ್ಟ್ 8, 2008 @ 6:47 ಅಪರಾಹ್ನ | ಉತ್ತರ

  2. >>ಆಗಸವದೇನು ರವಿ ಇಲ್ಲದಿರಲು
    ಯಾಕ್ರಿ ಚಂದ್ರ ನಕ್ಷತ್ರ ಎಲ್ಲಾ ಇಷ್ಟ ಆಗೋಲ್ವಾ ನಿಮ್ಗೆ?

    ಪ್ರತಿಕ್ರಿಯೆ by palachandra — ಫೆಬ್ರವರಿ 18, 2009 @ 5:43 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

%d bloggers like this: