ಟೈಂ ಪಾಸ್ ಬರಹಗಳು

ಜುಲೈ 10, 2008

ಹೀಗೊಂದು ಮಾತಿದೆಯಂತೆ….

Filed under: kavana — saagari @ 5:30 ಅಪರಾಹ್ನ

ಹೀಗೊಂದು ಮಾತಿದೆಯಂತೆ
ಲೋಕದಲ್ಲಿ ಚಂದ್ರನನ್ನು
ಕಾತರದಿ ನೋಡುವವರು
ಇಬ್ಬರೇ ಇಬ್ಬರಂತೆ;
ಒಬ್ಬ ಕವಿಯಂತೆ,
ಇನ್ನೊಬ್ಬ ಪ್ರೇಮಿಯಂತೆ !

ಕವಿಯು ಪ್ರೇಮಕವಿತೆ
ನಿನ್ನ ನೋಡಿ ಬರೆದರೆ
ಪ್ರೇಮಿ ನಿನ್ನ ನೋಡಿ
ತಾ ಕವಿಯಾಗುವನಂತೆ !
ಅಮಾವಾಸ್ಯೆಯನ್ನ ಇಬ್ಬರೂ
ವಿಪರೀತ ಬೈವರಂತೆ !!

ನಿನ್ನ ನೋಡಿ ಕಲಿಯಬೇಕು
ಅಂತ ಕವಿ ಅಂದನಂತೆ
ಕುಗ್ಗಿ ಹಿಗ್ಗಿ ಬದುಕೇ ಇದೆಂದು
ನೀನೆ ಅವನಿಗೆ ಹೇಳಿದೆಯಂತೆ !
ನೀನಿಲ್ಲದೇ ಅವನ ಕಾವ್ಯ
ಪೂರ್ಣವೇ ಅಲ್ಲವಂತೆ !

ಪ್ರೇಮಿ ನಿನ್ನ ಋಣಿಯಂತೆ
ಪ್ರೇಯಸಿಗೆ ತನ್ನ ದೂತನಾಗಿ
ಬೇರಾರೂ ಸಲ್ಲರಂತೆ
ಮೌನವನ್ನೇ ಮಾತಾಗಿಸುವ
ಕಲೆಯದು ನಿನಗಿಂತ
ಬೇರಾರಿಗೂ ಚೆನ್ನಾಗಿ ಒಲಿದಿಲ್ಲವಂತೆ !

ನಿನಗೆ ಶಾಪಸಿಕ್ಕಿದ್ದು ಪಾಪವಂತೆ
ನೀನು ಲೋಕಕ್ಕೆ ದೀಪವಂತೆ
ನಿನ್ನ ನೋಡೆ ಮನದ ತಾಪ
ಮಾತಾಡದೇ ಕಥೆಯಿಲ್ಲದೇ
ಸುಮ್ಮನೆ ತಾನಿಳಿವುದಂತೆ !

4 ಟಿಪ್ಪಣಿಗಳು »

 1. ವಾವ್! ಚೆನ್ನಾಗಿ ಬರೆದಿದ್ದೀಯ ಮಾ.

  ಪ್ರತಿಕ್ರಿಯೆ by ಅಂತರ್ವಾಣಿ — ಜುಲೈ 10, 2008 @ 6:49 ಅಪರಾಹ್ನ | ಉತ್ತರ

 2. oho, taavu prema kavite nu bareeteerO… ond thara sakkathaagide.. 🙂

  ಪ್ರತಿಕ್ರಿಯೆ by Parisarapremi — ಜುಲೈ 11, 2008 @ 2:50 ಅಪರಾಹ್ನ | ಉತ್ತರ

 3. ಹೋ ಸೂಪರೋ ಸೂಪರ್……. ನೀನ್ ಯಾವಾಗ ಪ್ರೇಮ ಕವಿಯಿತ್ರಿಯಾದೆ? ವಾಹ್ ವಾಹ್….. ಎರಡನೇ ಪುಟ ನನಗೆ ಸಿಕ್ಕಾಪಟ್ಟೆ ಇಷ್ಟವಾಯ್ತು.

  ಪ್ರತಿಕ್ರಿಯೆ by ಪುಷ್ಪಲತ — ಜುಲೈ 14, 2008 @ 4:41 ಅಪರಾಹ್ನ | ಉತ್ತರ

 4. comment maaDoNa ankonDe, aadre enoo hoLeetilla… yochne maaDoNa ankonDe… aadre time illa… bekal fort ge hogbeku!

  ಪ್ರತಿಕ್ರಿಯೆ by Srikanth - ಶ್ರೀಕಾಂತ — ಜುಲೈ 17, 2008 @ 1:25 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

%d bloggers like this: