ಟೈಂ ಪಾಸ್ ಬರಹಗಳು

ಜುಲೈ 10, 2008

ಜಗವೇ ನೀನೊಂದು ವಿಸ್ಮಯ

Filed under: kavana — saagari @ 4:30 ಫೂರ್ವಾಹ್ನ

ಕರಿಮೋಡದೊಡಲಲ್ಲಿ ಹನಿಮುತ್ತನಿಟ್ಟು
ಕಡುರಾತ್ರಿ ನಂತರದಿ ತಿಳಿಹಗಲನಿಟ್ಟು
ಕೆಡುಕಿನೊಳಗೆ ಒಳಿತನಡಗಿಸಿಹ
ಜಗವೇ ನೀನೊಂದು ವಿಸ್ಮಯ !

ಆಕಾಶದನಂತತೆಯಲಿ ಆನಂದವಿಟ್ಟು
ಅಬ್ಧಿಯಪ್ಪಳಿಕೆಯಲಿ ಆಸೆಯಿಟ್ಟು
ಆಸೆಯಿಂದ ಆನಂದವಂ ಅನ್ವೇಷಿಸಲು
ಪ್ರೇರಿಪ ಜಗವೇ ನೀನೊಂದು ವಿಸ್ಮಯ !

ಒಂದೆಡೆ ಹಿಮ ಇನ್ನೊಂದೆಡೆ ರಣಬಿಸಿಲು
ಒಂದೆಡೆ ಸಾಗರ ಮತ್ತೊಂದೆಡೆ ಮರುಭೂಮಿ
ಒಂದೇ ಭೂಮಿಯಲಿ ಹಲವು ಬಗೆಯ
ಹವೆಯಿಟ್ಟ- ಜಗವೇ ನೀನೊಂದು ವಿಸ್ಮಯ !

ಮಣ್ಣಲ್ಲಿ ಚಿನ್ನವಿಟ್ಟು ಚಿಪ್ಪಲ್ಲಿ ಮುತ್ತನಿಟ್ಟು
ಕಲ್ಲಲ್ಲಿ ವಜ್ರವಿಟ್ಟು ಅದಿರಲ್ಲಿ ಲೋಹವಿಟ್ಟು
ಹುಡುಕಲದ ನಾವು ಕಷ್ಟಪಟ್ಟು ಅದುವೆ ನೋಡು
ಸುಖದ ಗುಟ್ಟು ಎಂಬ ಜಗವೇ ನೀನೊಂದು ವಿಸ್ಮಯ !

3 ಟಿಪ್ಪಣಿಗಳು »

 1. jedara dasimayya in ladies shoe!:)

  ಪ್ರತಿಕ್ರಿಯೆ by ಶ್ರೀನಿಧಿ.ಡಿ.ಎಸ್ — ಜುಲೈ 10, 2008 @ 5:35 ಫೂರ್ವಾಹ್ನ | ಉತ್ತರ

 2. ತುಂಬಾ ಚೆನ್ನಾಗಿದೆ ಮಾ….ಎಲ್ಲಾ ನೆನ್ನೆನೆ ಹೇಳಿದ್ದೇನೆ.
  ಹವಾಮಾನ ವರದಿ ಚೆನ್ನಾಗಿದೆ 🙂

  ಪ್ರತಿಕ್ರಿಯೆ by ಅಂತರ್ವಾಣಿ — ಜುಲೈ 10, 2008 @ 5:12 ಅಪರಾಹ್ನ | ಉತ್ತರ

 3. nange “kaaNadante maayavaadanuuu…” haadu nenapaaytu…

  @shreenidhi: Mr. J.Das ge shoes haakkoLOke bartirlilla bidi…

  ಪ್ರತಿಕ್ರಿಯೆ by Parisarapremi — ಜುಲೈ 11, 2008 @ 2:51 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

%d bloggers like this: